ವರ್ಕ್ ಫ್ರಮ್ ಹೋಮ್
ಹಾಯ್ ನಮಸ್ತೆ,
ವೆಲ್ ಕಮ್ ಟು ಮೈ ಬ್ಲಾಗ್.
ನಮ್ಮ ಸಾರ್ವಜನಿಕ ಶಿಕ್ಷಣ ಇಲಾಖೆ ರಾಯಚೂರು,
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಿಂಧನೂರು,
ಕ್ಷೇತ್ರ ಸಂಪನ್ಮೂಲ ಕೇಂದ್ರ ಸಿಂಧನೂರು,
ಇವರಿಗೆಲ್ಲ ನನ್ನ ನಮಸ್ಕಾರಗಳು.
ನಾನು ಮಹಾಂತೇಶ್ ಬಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ರಂಪೂರ ಇಲ್ಲಿ ಸಹ ಶಿಕ್ಷಕ ಆಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೋವಿಡ್ 19 ಹರಡುವಿಕೆ ಹಿನ್ನೆಲೆಯಲ್ಲಿ ನಮ್ಮ ಕಲಬುರ್ಗಿ ಅಪರ ಆಯುಕ್ತರ ಆದೇಶದ ಪ್ರಕಾರ ನಮಗೆ ವರ್ಕ್ ಫ್ರಮ್ ಹೋಮ್ ಅಡಿಯಲ್ಲಿ ಹತ್ತು ನಿಯೋಜಿತ ಕಾರ್ಯಗಳನ್ನು ನೀಡಿದ್ದು, ಅವುಗಳನ್ನು ಮಾಡಿ ನಾವು ನಮ್ಮ ಬ್ಲಾಗ್ ಗೆ ಅಪ್ಲೋಡ್ ಮಾಡಬೇಕಿದೆ. ಈ ಒಂದು ಕಾರ್ಯ ನಮಗೆ ಖುಷಿ ಕೊಟ್ಟಿದೆ. ಕಾರಣ ನಾವು ಇದರಿಂದ ಇನ್ನು ಹೆಚ್ಚು ಕಲಿಯಲು ಹಾಗೂ ತಿಳಿದುಕೊಳ್ಳಲು ಸಹಕಾರಿ ಆಗಿದೆ.ಪ್ರತಿಯೊಬ್ಬ ಶಿಕ್ಷಕರಿಗೂ ಇದು ನೆರವಾಗುತ್ತದೆ.
ಕಲಿಕೋಪಕರಣ ತಯಾರಿ,ಮಕ್ಕಳ ಜೊತೆ ಮಾತುಕತೆ, ಸಹೋದ್ಯೋಗಿ ಜೊತೆ ಚರ್ಚೆ,ಹಾಗೆ ಪಾಲಕರ ಜೊತೆ ಚರ್ಚೆ ಮೂಲಕ ಮಕ್ಕಳ ಕಲಿಕೆ ದೃಢೀಕರಣ, ಇವೆಲ್ಲ ಕಾರ್ಯಗಳ ಮೂಲಕ ನಾವು ಅತ್ಯಂತ ಕ್ರಿಯಾಶೀಲರಾಗಿ ಕಾರ್ಯ ಮಾಡಲು ಅನುಕೂಲವಾಗುತ್ತದೆ.
ಹಾಗಾಗಿ ಈ ವರ್ಕ್ ಫ್ರಮ್ ಹೋಮ್ ಕಾರ್ಯ ನಮಗೆ ಮಹತ್ವದ್ದಾಗಿದೆ.
Comments
Post a Comment